ಕನ್ನಡ English हिन्दी తెలుగు मराठी ગુજરાતી বাংলা தமிழ் മലയാളം ਪੰਜਾਬੀ অসমীয়া

State News

ಸಾವಿನಲ್ಲೂ ಒಂದಾದ ಜೀವದ ಗೆಳತಿಯರು: ಸುಟ್ಟು ಕರಕಲಾದ ನವ್ಯ-ಮಾನಸಳ ಗೆಳೆತನ ಬಿಚ್ಚಿಟ್ಟು ಕಣ್ಣೀರಿಟ್ಟ ತಂದೆ

Posted By: devarajnaik0
Updated on: Dec 28, 2025 | 4:19 PM

ಚಿತ್ರದುರ್ಗ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Accident) ವರ್ಷದ ಭೀಕರ ದುರಂತದಲ್ಲಿ ಒಂದಾಗಿದೆ. ಕಂಟೇನರ್​ ಡಿಕ್ಕಿಯಿಂದ ಖಾಸಗಿ ಸ್ಲೀಪರ್ ಕೋಚ್ ಬಸ್​ ಹೊತ್ತಿ ಉರಿದಿದೆ. ದುರಂತದಲ್ಲಿ ಒಟ್ಟು 7ಜನ ಸಾವನ್ನಪ್ಪಿದ್ದಾರೆ. ಅದರಲ್ಲೂ ಇನ್ನು ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಎನ್ನುವ ಕುಚಿಕು ಗೆಳೆಯರು ಸಹ ಸುಟ್ಟು ಕರಕಲಾಗಿದ್ದು, ನವ್ಯಳ ತಂದೆ ಮಂಜಪ್ಪ, ಸುಟ್ಟ ಕರಕಲಾದ ಬಸ್​ನಲ್ಲಿ ಮಗಳನ್ನ ಹುಡುಕುತ್ತಿದ್ದು ದೃಶ್ಯ ಮನಕಲಕುವಂತಿತ್ತು. ಇನ್ನು ಇದೀಗ ನವ್ಯ ಹಾಗೂ ಮಾನಸಳ ಗೆಳೆತನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ.

ಹಾಸನ, (ಡಿಸೆಂಬರ್ 26): ಚಿತ್ರದುರ್ಗ (Chitradruga) ಜಿಲ್ಲೆಯ ಹಿರಿಯೂರು ಪಟ್ಟಣದ ಬಳಿ ಸಂಭವಿಸಿದ ಭೀಕರ ಬಸ್ ದುರಂತದಲ್ಲಿ (Bus Incident)  ಒಟ್ಟು 7 ಮಂದಿ ಪ್ರಾಣ ಕಳೆದುಕೊಂಡಿದ್ದು, ಸದಾ ಜೊತೆಯಲ್ಲೇ ಇರುತ್ತಿದ್ದ ಹಾಸನದ (Hassan) ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಸಹ ಸುಟ್ಟು ಕರಕಲಾಗಿದ್ದಾರೆ. ಇದರೊಂದಿಗೆ ಕುಚಿಕು ಗೆಳೆಯರು ಸಾವಿನಲ್ಲೂ ಜೊತೆಯಾಗಿದ್ದಾರೆ. ಇನ್ನು ಮೃತ ಮಗಳು ನವ್ಯ ತಂದೆ ಮಂಜಪ್ಪ ಮಾತನಾಡಿ, ನಿನ್ನೆ ಬೆಳಿಗ್ಗೆ7 ಗಂಟೆಗೆ ನಮಗೆ ವಿಷಯ ತಿಳಿಯಿತು ಅವರು ಮಾನಸ, ನವ್ಯ, ಮಿಲನ ಮೂರು ಜನರು ಹೋಗಿದ್ರು. ಅದರಲ್ಲಿ ಮಿಲನ ಬದುಕಿದ್ದರಿಂದ ನಮಗೆ ಫೋನ್ ಮಾಡಿ ಹೇಳಿದರು. ಹೋಗಿ ನೋಡಿದಾಗ ನಮ್ಮ ಮಗಳು ಹಾಗೂ ಮಾನಸ ಸಂಪೂರ್ಣ ಸುಟ್ಟು ಹೋಗಿದ್ದರು. ನಮ್ಮ ಮಗಳು ಕೂತಿದ್ದ ಸೀಟ್ ಸಮೀಪಕ್ಕೇ ಲಾರಿ ಡಿಕ್ಕಿಯಾಗಿದೆ. ಅವರು ಅದರೊಳಗೇ ಜ್ಞಾನ ತಪ್ಪಿದಾರೆ. ಹಾಗಾಗಿ ಅಲ್ಲೇ ಸುಟ್ಟು ಹೋಗಿದಾರೆ. ಮೃತದೇಹ ಕಂಡು ಹಿಡಿಯಲು ಆಗದ ರೀತಿ ಆಗಿತ್ತು ಎಂದು ಬಿಕ್ಕಿ ಬಿಕ್ಕಿ ಹತ್ತರು.

ನವ್ಯ-ಮಾನಸದ ಸ್ನೇಹ ಹೇಗಿತ್ತು?

ಇನ್ನು ಮಂಜಪ್ಪ ಅವರು ನವ್ಯ ಹಾಗೂ ಮಾನಸ ಸ್ನೇಹದ ಬಗ್ಗೆ ಎಳೆ ಎಳೆಯಾಗಿ ಬಿಟ್ಟಿದ್ದಾರೆ. ಮಾನಸ ಹಾಗೂ ನವ್ಯ ಒಂದೇ ರೀತಿಯ ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಒಂದೇ‌ ರೀತಿಯ ಜ್ಯುವೆಲರಿ ಹಾಕಿಕೊಳ್ಳುತ್ತಿದ್ದರು. ಇಬ್ಬರು ಓದಿದ್ದು ಒಂದೇ ಕಾಲೇಜು. ಒಟ್ಟಿಗೆ ಒಂದೇ ಕಡೆ ಕೆಲಸ ಮಾಡುತಿದ್ದರು. ಒಂದೇ ತಟ್ಟೆಯಲ್ಲಿ ಅನ್ನ ತಿನ್ನೋರು. ಎಲ್ಲಿಗೆ ಹೋಗಲಿ ಊರಿಗೆ ಬರಲಿ ಒಟ್ಟಿಗೆ ಓಡಾಡೋರು. ಅವರಿಬ್ಬರು ಒಟ್ಟಿಗೆ ಇದ್ದದ್ದು ನಮಗೂ ಧೈರ್ಯ ಇತ್ತು. ಆದರೆ ದೇವರು ಈ ರೀತಿ ಅನ್ಯಾಯ ಮಾಡಿಬಿಟ್ಟ. ಎರಡು ವರ್ಷದಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಬೆಂಗಳೂರಿನ ಮಾರತ್ ಹಳ್ಳಿಯಲ್ಲಿ ಇದ್ದರು. ಜೊತೆಯಲ್ಲೆ ಇದ್ದರು ಈ ಜೊತೆಯಾಗೆ ನಮ್ಮನ್ನ ಬಿಟ್ಟು ಹೋದ್ರು ಎಂದು ಕಣ್ಣೀರಿಟ್ಟರು.

Shorts Shorts