ಕನ್ನಡ English हिन्दी తెలుగు मराठी ગુજરાતી বাংলা தமிழ் മലയാളം ਪੰਜਾਬੀ অসমীয়া

State News

ಉದ್ಯಮಿ ಕಿಡ್ನ್ಯಾಪ್: 1 ಕೋಟಿ ರೂ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ಆರೋಪಿಗಳ ಕೈಗೆ ಸಿಕ್ಕಿದ್ದು ಚಿಪ್ಪು

ಸದ್ಯದ ದಿನಮಾನಗಳಲ್ಲಿ ಯಾರನ್ನ ನಂಬುವುದು, ಯಾರನ್ನ ನಂಬಾರದು ಎಂಬುವುದು ದೊಡ್ಡ ಪ್ರಶ್ನೆ. ಏಕೆಂದರೆ ಜೊತೆಗೆ ಇದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರು ಹೆಚ್ಚಾಗಿದ್ದಾರೆ. ಇದಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದಿರುವ ಈ ಘಟನೆಯೇ ಸಾಕ್ಷಿ. ಹಣದಾಸೆಗೆ ಅಪಹರಣ ಮಾಡಿ, ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಮೈಸೂರು, ಡಿಸೆಂಬರ್​​ 08: ಹಣದಾಸೆಗೆ ಉದ್ಯಮಿಯನ್ನು ಕಿಡ್ನ್ಯಾಪ್ (Kidnapping)​ ಮಾಡಿದ್ದ ನಾಲ್ವರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು (police) ಬಂಧಿಸಿದ್ದಾರೆ. ಸಂತೋಷ್, ಅಭಿಷೇಕ್, ಪ್ರಜ್ವಲ್, ದರ್ಶನ್ ಬಂಧಿತರು. ಎರಡು ದಿನದ ಹಿಂದೆ ವಿಜಯನಗರದ ಹೆರಿಟೇಜ್ ಕ್ಲಬ್ ಬಳಿ ಲೋಕೇಶ್​​​​ರನ್ನು ಅಪಹರಣ ಮಾಡಿ ಬಳಿಕ 30 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೈಸೂರು ವಿಜಯನಗರ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಅಪಹರಣವಾಗಿದ್ದ ರಿಯಲ್ ಎಸ್ಟೇಟ್​​ ಉದ್ಯಮಿಯನ್ನು ರಕ್ಷಿಸಿದ್ದಾರೆ. ಜೊತೆಗೆ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದಾರೆ. ಲೋಕೇಶ್ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಹಣಕಾಸು ವಹಿವಾಟು ಜೋರಾಗಿತ್ತು. ಲೋಕೇಶ್ ವ್ಯವಹಾರವನ್ನು ಹತ್ತಿರದಿಂದ ಗಮನಿಸಿದ್ದ ಸಂತೋಷ್ ಎಂಬಾತ ಮೊದಲು ಅವರನ್ನು ಪರಿಚಯ ಮಾಡಿಕೊಳ್ಳುತ್ತಾನೆ. ನಂತರ ಲೋಕೇಶ್ ಚಲನವಲನವನ್ನು ಸೂಕ್ಷ್ಮವಾಗಿ ಗಮನಿಸಿ, ನಂತರ ಅಪಹರಣಕ್ಕೆ ಸಂಚು ರೂಪಿಸುತ್ತಾನೆ. ಸಂತೋಷ್ ತನ್ನ ಜೊತೆಗೆ ಸ್ನೇಹಿತರಾದ ಅಭಿಷೇಕ್, ಪ್ರಜ್ವಲ್, ದರ್ಶನ್ ಹಾಗೂ ಪ್ರೀತಂ ಸೇರಿಸಿಕೊಂಡು ಲೋಕೇಶ್ ಅಪರಹರಣಕ್ಕೆ ಸ್ಕೆಚ್ ಹಾಕುತ್ತಾರೆ. ಕಣ್ಣಿಗೆ ಕಾರದಪುಡಿ ಎರಚಿ ಕಿಡ್ನ್ಯಾಪ್ ಡಿಸೆಂಬರ್ 6ರಂದು ಶನಿವಾರ ರಾತ್ರಿ 8.15 ಗಂಟೆ ಸಮಯ‌. ವಿಜಯನಗರ 3ನೇ ಹಂತದ ಹೆರಿಟೇಜ್ ಕ್ಲಬ್​ನಿಂದ ಮನೆಗೆ ತೆರಳಳು ಹೊರಗೆ ಬಂದ ಲೋಕೇಶ್ ಮೇಲೆ ಅಟ್ಯಾಕ್ ಮಾಡಿದ ಇವರು ಕಣ್ಣಿಗೆ ಖಾರದ ಪುಡಿ ಎರಚಿ ಬಲವಂತವಾಗಿ ಟಾಟಾ ಸುಮೋ ವಾಹನದಲ್ಲಿ ಎತ್ತಿ ಹಾಕಿಕೊಂಡು ಅಪಹರಣ ಮಾಡುತ್ತಾರೆ. ಲೋಕೇಶ್ ನನ್ನು ಒತ್ತೆಯಾಳು ಆಗಿರಿಸಿಕೊಂಡ ಆರೋಪಿಗಳು ಆರಂಭದಲ್ಲಿ ಒಂದು ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದರು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಈ ಬಗ್ಗೆ ಕಿಡ್ನ್ಯಾಪ್ ಆದ ಲೋಕೇಶ್​​ ಪತ್ನಿ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಕೆ.ಆರ್ ನಗರದ ಹಂಪಾಪುರ ಬಳಿ ವಶಕ್ಕೆ ಪಡೆದು ಲೋಕೇಶ್​​ರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಪ್ರಕರಣದ ಕಿಂಗ್ ಪಿನ್ ಸಂತೋಷ್, ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್​​.ಎಸ್ ರಸ್ತೆಯ ಪಂಪ್ ಹೊಸಳ್ಳಿ ಗ್ರಾಮದವನು. ಈತನಿಗೆ ನಾಲ್ಕು ತಿಂಗಳಿನಿಂದ ಲೋಕೇಶ್​​ ಪರಿಚಯವಿತ್ತು. ಅಷ್ಟೇ ಅಲ್ಲದೆ ಲೋಕೇಶ್ ಫೈನಾನ್ಸ್, ರಿಯಲ್ ಎಸ್ಟೇಟ್​​ನಲ್ಲಿ ಹಣ ಮಾಡಿಕೊಂಡಿರುವ ವಿಚಾರ ಗೊತ್ತಿತ್ತು. ಹಾಗಾಗಿ ತನ್ನ ಇತರೆ ಸ್ನೇಹಿತರೊಂದಿಗೆ ಸೇರಿ ಲೋಕೇಶ್​​ರನ್ನ ಅಪಹರಣ ಮಾಡಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, 5 ತಂಡಗಳನ್ನ ರಚಿಸಿ ಕಾರ್ಯಾಚರಣೆ ನಡೆಸಿದರು. ಮೊದಲಿಗೆ ಪತ್ನಿಯ ಮೂಲಕ ಮಾಹಿತಿ ಪಡೆದುಕೊಂಡ ಪೊಲೀಸರು 30 ಲಕ್ಷ ರೂ. ಹಣ ಕೊಡುವುದಾಗಿ ಆರೋಪಿ ಪ್ರೀತಂ ಎಂಬಾತನನ್ನು ಕರೆಸಿಕೊಂಡಿದ್ದಾರೆ. ಮತ್ತೊಂದು ಕಡೆ ಕೆಆರ್​ ನಗರ ಹಂಪಾಪುರ ಬಳಿ ಲೋಕೇಶ್ ಇರಿಸಿಕೊಂಡಿದ್ದನ್ನ ಟವರ್ ಲೊಕೇಷನ್ ಮೂಲಕ ಪತ್ತೆ ಹಚ್ಚಿದ್ದಾರೆ. ತಕ್ಷಣ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ‌ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಗಾರೆ ಕೆಲಸ, ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದ ಆರೋಪಿಗಳು ಸುಲಭವಾಗಿ ಹಣ ಮಾಡುವ ದಾರಿ ಅಂತಾ ಕಿಡ್ನ್ಯಾಪ್ ಮಾಡಿ ಜೈಲು ಸೇರಿದ್ದಾರೆ. ಒಟ್ಟಿನಲ್ಲಿ ಜೊತೆಗಿದ್ದವರೇ ಹಣದ ಆಸೆಗಾಗಿ ಈ ರೀತಿ ಮಾಡಿರುವುದು ನಿಜಕ್ಕೂ ದುರಂತವೇ ಸರಿ.

ಇ-ಖಾತೆ ನೀಡುವುದರಲ್ಲಿ ಸಾಕಷ್ಟು ತೊಂದರೆ: 10 ಹೊಸ ಸೇವಾಕೇಂದ್ರ ಆರಂಭಕ್ಕೆ ತೀರ್ಮಾನ

ಕಂದಾಯ ಇಲಾಖೆಯ ಇ-ಖಾತಾ ವಿತರಣೆಯಲ್ಲಿನ ವಿಳಂಬ ಹಾಗೂ ಸಾರ್ವಜನಿಕರ ಗೊಂದಲ ನಿವಾರಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ರಾಜ್ಯಾದ್ಯಂತ 10 ಇ-ಖಾತಾ ಸೇವಾ ಕೇಂದ್ರಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಅಲ್ಲದೆ, ಸಮಸ್ಯೆ ಬಗೆಹರಿಸಲು ಆಡಿಟ್ ತಂಡ ರಚನೆ, ಮೊಬೈಲ್ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಕೆ, ಮತ್ತು ಫೇಸ್‌ಲೆಸ್ ಇ-ಖಾತಾ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಪರಿಹಾರ ನೀಡುವ ಪ್ರಯತ್ನವಾಗಿದೆ. ಬೆಂಗಳೂರು, ಡಿ.6: ಇ-ಖಾತೆ ನೀಡುವುದರಲ್ಲಿ ಸಾಕಷ್ಟು ತೊಂದರೆಗಳು ಆಗುತ್ತಿದೆ. ಇದಕ್ಕೆ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (GBA) ಬೇರೆ ಬೇರೆ ಕ್ರಮಗಳನ್ನು ತಂದಿದೆ. ಇದರಿಂದ ಜನರಲ್ಲಿ ತುಂಬಾ ಗೊಂದಲ ಸೃಷ್ಟಿಯಾಗಿದೆ. ಈ ಸಮಸ್ಯೆ ಪರಿಹಾರ ಮಾಡಲು 10 ಸೇವಾ ಕೇಂದ್ರ ಆರಂಭಿಸಲು ತೀರ್ಮಾನ ಮಾಡಲಾಗಿದೆ. ಈ ಬಗ್ಗೆ ಕಂದಾಯ ವಿಭಾಗದ ವಿಶೇಷ ಆಯುಕ್ತ ಮನೀಶ್ ಮೌದ್ಗಿಲ್ ಮಾಹಿತಿ ನೀಡಿದ್ದಾರೆ. ಇದುವರೆಗೂ 8.16 ಲಕ್ಷ ಇ-ಖಾತೆ ಮಾತ್ರ ನೀಡಲಾಗಿದೆ. ಇದೀಗ ಇದನ್ನು ವೇಗಗೊಳಿಸಲು 10ಕ್ಕೂ ಹೆಚ್ಚು ಸೇವಾಕೇಂದ್ರಗಳನ್ನು ಆರಂಭಿಸಲು ಮುಂದಾಗಿದೆ. ಇ-ಖಾತೆ ನೀಡುವುದರಲ್ಲಿ ಉಂಟಾದ ಸಮಸ್ಯೆ ಬಗೆಹರಿಸಲು ಆಡಿಟ್ ತಂಡ ರಚನೆ ಮಾಡಲಾಗಿದೆ. ಇ-ಖಾತೆ ರಿಜೆಕ್ಟ್ ಆದರೆ ತಂಡ ಮಾನಿಟರ್ ಮಾಡುತ್ತೆ ಎಂದು ಆಯುಕ್ತ ಮನೀಶ್ ಮೌದ್ಗಿಲ್ ಹೇಳಿದ್ದಾರೆ. ಇ ಖಾತಾ ನೀಡಲು ತಡವಾಗುತ್ತಿರುವ ಕಾರಣ ಪಾಸ್ ಪೋರ್ಟ್ ಸೇವಾಕೇಂದ್ರ ರೀತಿಯಲ್ಲಿ ಸೇವಾ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗುವುದು, ಇದರ ಜತೆಗೆ ಇ ಖಾತಾಗೆ ವೇಗ ನೀಡಲಾಗುವುದು ಎಂದು ಹೇಳಿದ್ದಾರೆ. ಇ ಖಾತಾ ನೀಡಲು ತಡವಾಗುತ್ತಿದೆ. ಹಾಗೂ ಸರಿಯಾದ ವ್ಯವಸ್ಥೆ ಇಲ್ಲ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಅದನ್ನು ಪರಿಹಾರಿಸಲು ಈ ಕ್ರಮ ತರಲಾಗಿದೆ. ಜನ ಈ ಬಗ್ಗೆ ತಾಳ್ಮೆಯಿಂದ ಇರಬೇಕು ಎಂದು ಆಯುಕ್ತ ಮನವಿ ಮಾಡಿದ್ದಾರೆ. ಇನ್ನು ಬಿ ಟು ಎ ಖಾತಾ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ . ಈವರೆಗೂ 3252 ಅರ್ಜಿಗಳು ಮಾತ್ರ ಸ್ವೀಕಾರ ಮಾಡಿದ್ದೇವೆ. 8.21 ಲಕ್ಷ ಪೈಕಿ 8.16 ಲಕ್ಷ ಈ ಖಾತಾ ಅನುಮೋದನೆ ಆಗಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಹೇಳಿದ್ದಾರೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​​​ ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ ಎಂದು ಹೇಳಿದರು. ಸ್ಮಾರ್ಟ್‌ಫೋನ್​ನಿಂದಲೇ ನೇರವಾಗಿ ಇ-ಖಾತಾ ಅರ್ಜಿ: ಬೆಂಗಳೂರಿನಲ್ಲಿ ಇ-ಖಾತಾ ಅರ್ಜಿಗಳನ್ನು ಅಧಿಕೃತ ವೆಬ್‌ಸೈಟ್, ಬೆಂಗಳೂರು ಒನ್ ಕೇಂದ್ರಗಳು ಮತ್ತು ಸೈಬರ್ ಕೇಂದ್ರಗಳ ಮೂಲಕ ನಿರ್ವಹಿಸಲಾಗುತ್ತಿತ್ತು. ಇದೀಗ ಇಲ್ಲಿ ಆಗುವ ಸಮಸ್ಯೆಯನ್ನು ಪರಿಹಾರ ಮಾಡಲು ಹೊಸ ಅಪ್ಲಿಕೇಶನ್‌ನೊಂದಿಗೆ, ಆಸ್ತಿ ಮಾಲೀಕರು ಇನ್ಮುಂದೆ ತಮ್ಮ ಸ್ಮಾರ್ಟ್‌ಫೋನ್‌ಗಳಿಂದ ನೇರವಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಆದರೆ ಈ ಬಗ್ಗೆ ಬೆಂಗಳೂರಿನ ಆಸ್ತಿ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. ಮೊಬೈಲ್ ಆ್ಯಪ್ ಮೂಲಕ ಇ ಖಾತಾ ನೋಂದಣಿ ಅಸಾಧ್ಯ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರು: ಇ ಖಾತಾ ಮಾಹಿತಿ ನೀಡಲು ಬರಲಿದೆ ಮೊಬೈಲ್ ಆ್ಯಪ್! ಫೇಸ್ ಲೆಸ್ ಇ-ಖಾತಾ: ಇ-ಖಾತಾ (E-Khata) ನೋಂದಣಿಯಲ್ಲಿ ಆಗುತ್ತಿದ್ದ ಸಮಸ್ಯೆಗಳಿಗೆ ಕೊನೆಗೂ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ (GBA) ಪರಿಹಾರ ನೀಡುವುದಕ್ಕೆ ಫೇಸ್‌ಲೆಸ್, ಕಾಂಟ್ಯಾಕ್ಟ್ ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಮಾಡಿದೆ. ಫೇಸ್‌ಲೆಸ್, ಕಾಂಟ್ಯಾಕ್ಟ್-ಲೆಸ್ ಮತ್ತು ಆನ್‌ಲೈನ್ ಇ-ಖಾತಾ ಜಾರಿ ಮಾಡಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಅಂತಿಮ ಇ-ಖಾತಾ ಅಥವಾ ಹೊಸ ಖಾತಾ ಅನುಮೋದಿಸಲು ಎಆರ್‌ಒ ಅಥವಾ ಕೇಸ್ ವರ್ಕರ್ ಆಸ್ತಿ ದಾಖಲೆಗಳನ್ನ ಮಾತ್ರ ಪರಿಶೀಲಿಸಬೇಕಾಗುತ್ತೆ.

ಭಾರತಕ್ಕೆ ಟಿ-20 ವಿಶ್ವಕಪ್‌ ಕಿರೀಟ; ಬೆಳಗಾವಿಯ ಮಹಾಂತೇಶ ಕಿವಡಸಣ್ಣವರ ಶ್ರಮಕ್ಕೆ ಸಿಕ್ಕ ಫಲ

ಭಾರತದ ಅಂಧರ ಮಹಿಳಾ ತಂಡವು ಚೊಚ್ಚಲ ಟಿ-20 ವಿಶ್ವಕಪ್‌ ಗೆದ್ದು ಇತಿಹಾಸ ನಿರ್ಮಾಣ ಮಾಡಿದೆ. ಈ ಗೆಲುವಿನ ಹಿಂದೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ನೇಗಿನಹಾಳ ಮೂಲದ ಡಾ. ಮಹಾಂತೇಶ ಕಿವಡಸಣ್ಣವರ ಅವರ ಪಾತ್ರವೂ ಪ್ರಮುಖ. ಮಹಾಂತೇಶ ಕಿವಡಸಣ್ಣವರ. 2011ರಲ್ಲಿ ಅಂಧರ ಕ್ರಿಕೆಟ್‌ ಸಂಸ್ಥೆ ಸ್ಥಾಪಿಸಿದರು. ಪುರುಷರ ಮತ್ತು ಮಹಿಳಾ ತಂಡಗಳನ್ನು ಕಟ್ಟುವಲ್ಲಿ, ತರಬೇತಿ ನೀಡುವಲ್ಲಿ ಶ್ರಮಿಸಿದ್ದರು. ಬೆಳಗಾವಿ: ಅಂಧರ ಮಹಿಳಾ ಟಿ 20 ಪಂದ್ಯದಲ್ಲಿಭಾರತ ತಂಡ ಚಾಂಪಿಯನ್‌ ಪಟ್ಟ ಅಲಂಕರಿಸಿ, ಮೊದಲ ಪಂದ್ಯಾವಳಿಯಲ್ಲೇ ವಿಶ್ವಕಪ್‌ ಮುಡಿಗೇರಿಸಿಕೊಂಡಿದೆ. ವಿಶ್ವ ವಿಜೇತ ಭಾರತ ತಂಡದ ಪ್ರೇರಕ ಶಕ್ತಿ ಬೆಳಗಾವಿ ಜಿಲ್ಲೆಯ ನೇಗಿನಹಾಳ ಮೂಲದ ಡಾ.ಮಹಾಂತೇಶ ಕಿವಡಸಣ್ಣವರ ಎಂಬುದು ಹೆಮ್ಮೆಯ ಸಂಗತಿ.    by Taboola Sponsored Links You May Like

ಧರ್ಮ, ದೇವರ ಹೆಸರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಅವಕಾಶ ನೀಡಲಾಗದು: ಹೈಕೋರ್ಟ್‌ ಖಡಕ್‌ ಎಚ್ಚರಿಕೆ

ಸರಕಾರಿ ಜಾಗವನ್ನು ಧರ್ಮದ ಹೆಸರಿನಲ್ಲಿ ಒತ್ತುವರಿ ಮಾಡುವುದಕ್ಕೆ ಹಾಗೂ ದೇವರ ಹೆಸರಿನಲ್ಲಿ ರಿಯಲ್ ಎಸ್ಟೇಟ್ ನಡೆಸಲು ಅವಕಾಶವಿಲ್ಲ ಎಂದು ಹೈಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಕೋಲಾರ ಜಿಲ್ಲೆಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲಾ ಕಾಂಪೌಂಡ್ ಹಾಗೂ ರಸ್ತೆಯ ಜಾಗದಲ್ಲಿ ನಿರ್ಮಿಸಿರುವ ಮಳಿಗೆಗಳ ತೆರವಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಬೆಂಗಳೂರು: ಧರ್ಮದ ಹೆಸರಲ್ಲಿ ಸರಕಾರಿ ಜಾಗ ಅತಿಕ್ರಮಿಸಲು ಹಾಗೂ ದೇವರ ಹೆಸರಲ್ಲಿ ರಿಯಲ್‌ ಎಸ್ಟೇಟ್‌ಗೆ ಅವಕಾಶ ನೀಡಲಾಗದು ಎಂದು ಹೈಕೋರ್ಟ್‌ ಪ್ರಕರಣವೊಂದರ ವಿಚಾರಣೆ ವೇಳೆ ಖಡಕ್‌ ಎಚ್ಚರಿಕೆ ನೀಡಿದೆ. ಕೋಲಾರ ಜಿಲ್ಲೆಯ ವೇಮಗಲ್‌ ಹೋಬಳಿಯ ಕ್ಯಾಲನೂರು ಗ್ರಾಮದ ಸರಕಾರಿ ಶಾಲೆಯ ಕಾಂಪೌಂಡ್‌ ಹಾಗೂ ಗ್ರಾಮದ ರಸ್ತೆಯ ಸರಕಾರಿ ಜಾಗದಲ್ಲಿ ನಿರ್ಮಿಸಿರುವ ಮಳಿಗೆಗಳ ತೆರವಿಗೆ ತಹಸೀಲ್ದಾರ್‌ ಜಾರಿಗೊಳಿಸಿರುವ ನೋಟಿಸ್‌ ಪ್ರಶ್ನಿಸಿ ಗ್ರಾಮದ ವಿರಾಟ್‌ ಹಿಂದೂ ಸೇವಾ ಚಾರಿಟಬಲ್‌ ಟ್ರಸ್ಟ್‌ ಹಾಗೂ ಜಾಮೀಯಾ ಮಸ್ಜಿದ್‌ ಸಮಿತಿ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಸ್‌. ಸುನೀಲ್‌ ದತ್‌ ಯಾದವ್‌ ಅವರಿದ್ದ ಏಕಸದಸ್ಯ ಪೀಠ ಗುರುವಾರ ಈ ರೀತಿ ಮೌಖಿಕವಾಗಿ ಹೇಳಿದೆ.

ಗಣೇಶ್ ಚಿತ್ರಕ್ಕೆ ಮಾಳವಿಕಾ ಶರ್ಮಾ ಕನ್ನಡಕ್ಕೆ ಪದಾರ್ಪಣೆ?

ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ರೊಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ಚಿತ್ರಕ್ಕೆ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿರುವ ನಟಿ ಮಾಳವಿಕಾ ಶರ್ಮಾ ಅವರು ನಾಯಕಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಚಿತ್ರವನ್ನು ಶ್ರೀನಿವಾಸ್ ರಾಜು ನಿರ್ದೇಶಿಸುತ್ತಿದ್ದಾರೆ. ಗಣೇಶ್ ಅವರು ಈ ಚಿತ್ರದಲ್ಲಿ ಸಂಗೀತ, ಕೃಷಿ ಮತ್ತು ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಬುದ್ಧಿವಂತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೇ. 60ರಷ್ಟು ಚಿತ್ರೀಕರಣ ಮುಗಿದಿದೆ ಮತ್ತು ಇದು 2026ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

‘ಕಾಂತಾರ: ಚಾಪ್ಟರ್ 1’ ಬಾಕ್ಸ್ ಆಫೀಸ್ ಸದ್ದು

ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರವಾದ ‘ಕಾಂತಾರ: ಚಾಪ್ಟರ್ 1’ ಬಿಡುಗಡೆಯಾಗಿ ಭಾರಿ ಯಶಸ್ಸು ಕಾಣುತ್ತಿದೆ. ಈ ಸಿನಿಮಾವು ಬಿಡುಗಡೆಯಾದ ಕೆಲವೇ ದಿನಗಳಲ್ಲಿ 500 ಕೋಟಿ ರೂಪಾಯಿಗಳ ಗಡಿ ದಾಟಿ, ಪ್ರಾದೇಶಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಮುರಿದಿದೆ. ಇದು 2022ರ ಸೂಪರ್‌ಹಿಟ್ ‘ಕಾಂತಾರ’ದ ಪ್ರೀಕ್ವೆಲ್ ಆಗಿದ್ದು, ಕದಂಬ ರಾಜವಂಶದ ಕಾಲದ, ದೈವದ ಮೂಲದ ಕಥೆಯನ್ನು ಒಳಗೊಂಡಿದೆ. ಚಿತ್ರದಲ್ಲಿರುವ ಸಾಹಸ ಸನ್ನಿವೇಶಗಳು ಮತ್ತು ದೃಶ್ಯ ವೈಭವಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲೂ ಉದ್ವಿಗ್ನತೆ: ಕುಶವಾಹ ಅಸಮಾಧಾನ

ಬಿಹಾರದಲ್ಲಿ ಆಡಳಿತಾರೂಢ ಎನ್‌ಡಿಎ (NDA) ಮೈತ್ರಿಕೂಟವು ಸೀಟು ಹಂಚಿಕೆಯನ್ನು ಅಂತಿಮಗೊಳಿಸಿದ್ದರೂ, ಮೈತ್ರಿಕೂಟದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ರಾಷ್ಟ್ರೀಯ ಲೋಕ ಮೋರ್ಚಾ (RLM) ಮುಖ್ಯಸ್ಥ ಉಪೇಂದ್ರ ಕುಶವಾಹ ಅವರು ಅಸಮಾಧಾನಗೊಂಡಿದ್ದಾರೆ. ಎನ್‌ಡಿಎ ಒಳಗೆ ಚಿರಾಜ್ ಪಾಸ್ವಾನ್ ನೇತೃತ್ವದ ಎಲ್‌ಜೆಪಿ(ಆರ್.ವಿ)ಗೆ 29 ಸ್ಥಾನಗಳನ್ನು ನೀಡಲಾಗಿದೆ. ಇದು ಜೆಡಿ(ಯು) ಮತ್ತು ಆರ್‌ಎಲ್‌ಎಂ ಸೇರಿದಂತೆ ಇತರ ಮಿತ್ರಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ. ಕುಶವಾಹ ಅವರು ತಾವು ಭರವಸೆ ನೀಡಿದ್ದ ಕೆಲವು ನಿರ್ದಿಷ್ಟ ಸ್ಥಾನಗಳಿಗಾಗಿ ಹಿರಿಯ ಬಿಜೆಪಿ ನಾಯಕರನ್ನು ಭೇಟಿ ಮಾಡಲು ದಿಲ್ಲಿಗೆ ತೆರಳಿದ್ದಾರೆ.

ಬಿಹಾರ ಚುನಾವಣೆ: ‘ಮಹಾಗಠಬಂಧನ್’‌ನಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿಕೆ

ಬಿಹಾರ ವಿಧಾನಸಭಾ ಚುನಾವಣೆಗಳಿಗೆ ನಾಮಪತ್ರ ಸಲ್ಲಿಸಲು ಅಕ್ಟೋಬರ್ 17 ಅಂತಿಮ ದಿನಾಂಕ ಸಮೀಪಿಸುತ್ತಿದ್ದರೂ, ಪ್ರತಿಪಕ್ಷಗಳ **’ಮಹಾಗಠಬಂಧನ್’**ನಲ್ಲಿ ಸೀಟು ಹಂಚಿಕೆಯ ಬಿಕ್ಕಟ್ಟು ಮುಂದುವರೆದಿದೆ. ಕಾಂಗ್ರೆಸ್ ಮತ್ತು ಆರ್‌ಜೆಡಿ (RJD) ನಡುವಿನ ಒಪ್ಪಂದ ಅಂತಿಮಗೊಳ್ಳದೇ ಇರುವುದು ಮೈತ್ರಿಕೂಟದಲ್ಲಿ ಆತಂಕ ಮೂಡಿಸಿದೆ. ಕಾಂಗ್ರೆಸ್ ಕನಿಷ್ಠ 65 ಸ್ಥಾನಗಳ ಬೇಡಿಕೆಗೆ ಅಂಟಿಕೊಂಡಿದ್ದರೆ, ಆರ್‌ಜೆಡಿ ಸುಮಾರು 55 ಸ್ಥಾನಗಳನ್ನು ಬಿಟ್ಟುಕೊಡಲು ಸಿದ್ಧವಿದೆ ಎಂದು ಮೂಲಗಳು ತಿಳಿಸಿವೆ. ಏತನ್ ಮಧ್ಯೆ, ಜೆಡಿ(ಯು) ಮತ್ತು ಬಿಜೆಪಿ ಪಕ್ಷಗಳು ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ, ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ.

ಭಾರತ ಕ್ರಿಕೆಟ್ ತಾರೆಯರು ಆಸ್ಟ್ರೇಲಿಯಾ ಪ್ರವಾಸಕ್ಕೆ ಪ್ರಯಾಣ

ಭಾರತ ಪುರುಷರ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವೈಟ್‌ಬಾಲ್ ಸರಣಿಗಾಗಿ (ಮೂರು ODI ಮತ್ತು ಐದು T20I ಪಂದ್ಯಗಳು) ಪ್ರಯಾಣ ಬೆಳೆಸಿದೆ. ಈ ಪ್ರವಾಸದೊಂದಿಗೆ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಮುಂದಿನ ODI ಸರಣಿಗೆ ಶುಭಮನ್ ಗಿಲ್ ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಈ ಸರಣಿಯು ಅಕ್ಟೋಬರ್ 19 ರಂದು ಪರ್ತ್‌ನಲ್ಲಿ ಆರಂಭವಾಗಲಿದೆ ಮತ್ತು 2027 ರ ವಿಶ್ವಕಪ್‌ಗೆ ತಂಡದ ಸಿದ್ಧತೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಟಿ20ಐ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿದಿರುವ ರೋಹಿತ್ ಮತ್ತು ಕೊಹ್ಲಿ ಅವರು ಕೇವಲ ಬ್ಯಾಟ್ಸ್‌ಮನ್‌ಗಳಾಗಿ ODI ಸ್ವರೂಪದಲ್ಲಿ ಆಡಲಿದ್ದಾರೆ.

ಮಾಹಿತಿ ಹಕ್ಕು ಆಯೋಗಕ್ಕೆ ಮೂವರು ಹೊಸ ಆಯುಕ್ತರ ನೇಮಕ

ಮಾಹಿತಿ ಹಕ್ಕು ಆಯೋಗಕ್ಕೆ ಮತ್ತೆ ಮೂವರು ಆಯುಕ್ತರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ, ಬಿ. ವೆಂಕಟ್ ಸಿಂಗ್, ಮತ್ತು ಡಾ. ಮಹೇಶ್ ವಾಳ್ವೆಕರ್ ಅವರು ನೂತನ ಆಯುಕ್ತರಾಗಿ ನೇಮಕಗೊಂಡಿದ್ದಾರೆ.

Shorts Shorts