
ಭಾರತದ ಅಂಧರ ಮಹಿಳಾ ತಂಡವು ಚೊಚ್ಚಲ ಟಿ-20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಿದೆ. ಈ ಗೆಲುವಿನ ಹಿಂದೆ ಕರ್ನಾಟಕದ ಬೆಳಗಾವಿ ಜಿಲ್ಲೆಯ ನೇಗಿನಹಾಳ ಮೂಲದ ಡಾ. ಮಹಾಂತೇಶ ಕಿವಡಸಣ್ಣವರ ಅವರ ಪಾತ್ರವೂ ಪ್ರಮುಖ. ಮಹಾಂತೇಶ ಕಿವಡಸಣ್ಣವರ. 2011ರಲ್ಲಿ ಅಂಧರ ಕ್ರಿಕೆಟ್ ಸಂಸ್ಥೆ ಸ್ಥಾಪಿಸಿದರು. ಪುರುಷರ ಮತ್ತು ಮಹಿಳಾ ತಂಡಗಳನ್ನು ಕಟ್ಟುವಲ್ಲಿ, ತರಬೇತಿ ನೀಡುವಲ್ಲಿ ಶ್ರಮಿಸಿದ್ದರು.
ಬೆಳಗಾವಿ: ಅಂಧರ ಮಹಿಳಾ ಟಿ 20 ಪಂದ್ಯದಲ್ಲಿಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ, ಮೊದಲ ಪಂದ್ಯಾವಳಿಯಲ್ಲೇ ವಿಶ್ವಕಪ್ ಮುಡಿಗೇರಿಸಿಕೊಂಡಿದೆ. ವಿಶ್ವ ವಿಜೇತ ಭಾರತ ತಂಡದ ಪ್ರೇರಕ ಶಕ್ತಿ ಬೆಳಗಾವಿ ಜಿಲ್ಲೆಯ ನೇಗಿನಹಾಳ ಮೂಲದ ಡಾ.ಮಹಾಂತೇಶ ಕಿವಡಸಣ್ಣವರ ಎಂಬುದು ಹೆಮ್ಮೆಯ ಸಂಗತಿ.
You May Like





