ಕನ್ನಡ English हिन्दी తెలుగు मराठी ગુજરાતી বাংলা தமிழ் മലയാളം ਪੰਜਾਬੀ অসমীয়া
News Image
Hassan:

ಸಾವಿನಲ್ಲೂ ಒಂದಾದ ಜೀವದ ಗೆಳತಿಯರು: ಸುಟ್ಟು ಕರಕಲಾದ ನವ್ಯ-ಮಾನಸಳ ಗೆಳೆತನ ಬಿಚ್ಚಿಟ್ಟು ಕಣ್ಣೀರಿಟ್ಟ ತಂದೆ

ಚಿತ್ರದುರ್ಗ ಹಿರಿಯೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (Accident) ವರ್ಷದ ಭೀಕರ ದುರಂತದಲ್ಲಿ ಒಂದಾಗಿದೆ. ಕಂಟೇನರ್​ ಡಿಕ್ಕಿಯಿಂದ ಖಾಸಗಿ ಸ್ಲೀಪರ್ ಕೋಚ್ ಬಸ್​ ಹೊತ್ತಿ ಉರಿದಿದೆ. ದುರಂತದಲ್ಲಿ ಒಟ್ಟು 7ಜನ ಸಾವನ್ನಪ್ಪಿದ್ದಾರೆ. ಅದರಲ್ಲೂ ಇನ್ನು ಚನ್ನರಾಯಪಟ್ಟಣ ಮೂಲದ ನವ್ಯ ಹಾಗೂ ಮಾನಸ ಎನ್ನುವ ಕುಚಿಕು ಗೆಳೆಯರು ಸಹ ಸುಟ್ಟು ಕರಕಲಾಗಿದ್ದು, ನವ್ಯಳ ತಂದೆ ಮಂಜಪ್ಪ, ಸುಟ್ಟ ಕರಕಲಾದ ಬಸ್​ನಲ್ಲಿ ಮಗಳನ್ನ ಹುಡುಕುತ್ತಿದ್ದು ದೃಶ್ಯ ಮನಕಲಕುವಂತಿತ್ತು. ಇನ್ನು ಇದೀಗ ನವ್ಯ ಹಾಗೂ ಮಾನಸಳ ಗೆಳೆತನ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾರೆ.

News Image
Dakshina Kannada:

ಸದನದಲ್ಲೂ ಪುರುಷೋತ್ತಮ ಬಿಳಿಮಲೆ ಹೇಳಿಕೆ ಸದ್ದು: ಕ್ರಮಕ್ಕೆ BJP ಶಾಸಕರ ಆಗ್ರಹ

ಪುರುಷೋತ್ತಮ ಬಿಳಿಮಲೆ ಅವರ ಯಕ್ಷಗಾನ ಕಲಾವಿದರ ಸಲಿಂಗಕಾಮ ಕುರಿತ ಹೇಳಿಕೆ ವಿಧಾನಸಭೆಯಲ್ಲಿಯೂ ಪ್ರತಿಧ್ವನಿಸಿದೆ. ಈ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಶಾಸಕರು, ಬಿಳಿಮಲೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನಲೆ ಬಿಳಿಮಲೆ ಅವರಿಗೆ ನೋಟಿಸ್​​ ನೀಡಿ ಸ್ಪಷ್ಟನೆ ಕೇಳಲು ಸರ್ಕಾರಕ್ಕೆ ಸ್ಪೀಕರ್​​ ಸೂಚಿಸಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಆಡಿದ್ದ ಮಾತುಗಳು ಭಾರಿ ವಿವಾದ ಸೃಷ್ಟಿಸಿದ್ದವು.

News Image
Bangalore Rural:

ಮೆಟ್ರೋ ಪ್ರಯಾಣಿಕರಿಗೆ ಕ್ರಿಸ್ಮಸ್, ಹೊಸ ವರ್ಷದ ಗಿಫ್ಟ್: 12 ನಿಮಿಷಕ್ಕೊಂದರಂತೆ ಸಂಚರಿಲಿದೆ ಯೆಲ್ಲೋ ಲೈನ್ ಮೆಟ್ರೋ

Namma Metro Yellow Line: ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಆರನೇ ರೈಲು ಸಂಚಾರ ಇದೇ 22 ರಿಂದ ಆರಭವಾಗುವ ಸಾಧ್ಯತೆ ಇದೆ. ಇದರಿಂದಾಗಿ ಪ್ರತಿ 12 ನಿಮಿಷಕ್ಕೊದರಂತೆರೈಲುಗಳು ಸಂಚಾರ ಮಾಡಲಿವೆ. ಆದರೆ, ಯೆಲ್ಲೋ ಲೈನ್​ನಲ್ಲಿ ಬೆಳಗ್ಗೆ 6ಕ್ಕೆ ಶುರುವಾಗುವ ಮೆಟ್ರೋ ಸಂಚಾರ ಅದೇ ರೀತಿ ಮುಂದುವರಿಯಲಿದೆ ಎಂದು ಬಿಎಂಆರ್​​ಸಿಎಲ್ ಮೂಲಗಳು ತಿಳಿಸಿವೆ.

News Image
Bangalore Rural:

ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಲ್ಲಿ ಭಾರೀ ವಂಚನೆ: ಅಮೆರಿಕ, ಬ್ರಿಟನ್ ಪ್ರಜೆಗಳ ಕೋಟ್ಯಂತರ ರೂ. ದೋಚಿದ ಬೆಂಗಳೂರು ಗ್ಯಾಂಗ್!

ಬೆಂಗಳೂರಿನ ಸೈಬರ್ ವಂಚಕರ ಗ್ಯಾಂಗ್ ಮೈಕ್ರೋಸಾಫ್ಟ್ ಸಪೋರ್ಟ್ ಹೆಸರಿನಲ್ಲಿ ಅಮೆರಿಕ ಮತ್ತು ಬ್ರಿಟನ್ ಪ್ರಜೆಗಳಿಂದ ಕೋಟ್ಯಂತರ ರೂ. ದೋಚಿರುವುದು ಬಯಲಾಗಿದೆ. ಸಂತ್ರಸ್ತರನ್ನು ಬಿಟ್‌ಕಾಯಿನ್ ಎಟಿಎಂಗಳಲ್ಲಿ ಹಣ ಠೇವಣಿ ಇಡುವಂತೆ ಮಾಡಿ ವಂಚನೆ ಎಸಗಲಾಗಿದೆ. ಈ ಪ್ರಕರಣದಲ್ಲಿ 22 ಮಂದಿ ಬಂಧಿತರಾಗಿದ್ದು, ಸುಮಾರು 150ಕ್ಕೂ ಹೆಚ್ಚು ಜನ ವಂಚನೆಗೊಳಗಾಗಿದ್ದಾರೆ.

News Image
International:

ಪಾಕಿಸ್ತಾನದಲ್ಲಿ ನ್ಯಾಯಾಧೀಶರ ರೂಂನಿಂದ ಸೇಬು ಹಣ್ಣು, ಹ್ಯಾಂಡ್​​ವಾಶ್ ಕಳ್ಳತನ; ಕೇಸ್ ದಾಖಲು

ಪಾಕಿಸ್ತಾನದ ಲಾಹೋರ್‌ನಲ್ಲಿ ಸೆಷನ್ಸ್ ನ್ಯಾಯಾಧೀಶರ ಕೊಠಡಿಯಿಂದ ಎರಡು ಸೇಬು ಮತ್ತು ಹ್ಯಾಂಡ್ ವಾಶ್ ಕಳ್ಳತನ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಡಿಸೆಂಬರ್ 5ರಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ನೂರ್ ಮುಹಮ್ಮದ್ ಬಸ್ಮಲ್ ಅವರ ಕೊಠಡಿಯಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

News Image
International:

Goa NightClub Fire: ಥೈಲ್ಯಾಂಡ್​ಗೆ ಓಡಿ ಹೋಗಿ ತಲೆಮರೆಸಿಕೊಂಡಿದ್ದ ಗೋವಾ ನೈಟ್​ಕ್ಲಬ್​ ಮಾಲೀಕರ ಬಂಧನ

ನೈಟ್​ಕ್ಲಬ್​ನಲ್ಲಿ ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಥೈಲ್ಯಾಂಡ್(Thailand)​ಗೆ ಪರಾರಿಯಾಗಿದ್ದ ಗೋವಾದ ರೋಮಿಯೋ ಲೇನ್ ನೈಟ್​ಕ್ಲಬ್ ಮಾಲೀಕರನ್ನು ಬಂಧಿಸಲಾಗಿದೆ. ಇತ್ತೀಚೆಗೆ ಕ್ಲಬ್​ನಲ್ಲಿ ಸಂಭವಿಸಿದ್ದ ಅಗ್ನಿ ಅವಘಡದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು. ಈ ಘಟನೆಯನ್ನು ಗೋವಾ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ದುರಂತದ ಬೆನ್ನಲ್ಲೇ ವಿದೇಶಕ್ಕೆ ಪರಾರಿಯಾಗಿರುವ ಕ್ಲಬ್‌ನ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ರೋಮಿಯೋ ಲೇನ್ ವಿರುದ್ಧ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಿದ್ದರು.

News Image
International:

ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು

US president Donald Trump unveils Gold Card Visa system: ಅಮೆರಿಕಕ್ಕೆ ಹಣ ಮತ್ತು ಪ್ರತಿಭೆಗಳನ್ನು ಸೆಳೆಯಲು ಡೊನಾಲ್ಡ್ ಟ್ರಂಪ್ ವಿವಿಧ ಮಾರ್ಗೋಪಾಯ ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿ ಗೋಲ್ಡ್ ಕಾರ್ಡ್ ಎನ್ನುವ ಹೊಸ ವೀಸಾ ಉತ್ಪನ್ನವನ್ನು ಅನಾವರಣಗೊಳಿಸಿದ್ದಾರೆ. ಒಬ್ಬ ವ್ಯಕ್ತಿ ಅಮೆರಿಕದ ಗೋಲ್ಡ್ ಕಾರ್ಡ್ ವೀಸಾ ಪಡೆಯಲು ಕನಿಷ್ಠ 9 ಕೋಟಿ ರೂ ವ್ಯಯಿಸಬೇಕಾಗುತ್ತದೆ.

ಅಮೌಂಟು, ಟ್ಯಾಲೆಂಟು ಎರಡೂ ಇದ್ರೆ ಮಾತ್ರ ತೆರೆಯುತ್ತೆ ಅಮೆರಿಕದ ಗೇಟು; ಇಲ್ಲಿದೆ ಟ್ರಂಪ್ ಗೋಲ್ಡ್ ಕಾರ್ಡ್ ವೀಸಾ ರೇಟು

ಗೋಲ್ಡ್ ಕಾರ್ಡ್ ವೀಸಾ

News Image
Dakshina Kannada:

ಕನಕನ ಕಿಂಡಿ ಸ್ವರ್ಣ ಕವಚ ಉದ್ಘಾಟನೆ ವಿವಾದ: ಗೊಂದಲಗಳಿಗೆ ಪ್ರಮೋದ್​​ ಮಧ್ವರಾಜ್​​ ತೆರೆ

ಶ್ರೀಕೃಷ್ಣ ಮಠದ ಕನಕನ ಕಿಂಡಿ ಸ್ವರ್ಣ ಕವಚವನ್ನು ಪ್ರಧಾನಿ ಮೋದಿ ಉದ್ಘಾಟಿಸಿದಾಗ, ದಾನಿ ಪ್ರಮೋದ್ ಮಧ್ವರಾಜ್‌ಗೆ ಆಹ್ವಾನವಿರಲಿಲ್ಲ. ಇದೇ ವಿಚಾರವೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಆದರೆ, ಕಡೆಗಣನೆ ಆರೋಪಗಳನ್ನು ತಳ್ಳಿಹಾಕಿದ ಮಧ್ವರಾಜ್, ಪ್ರಧಾನಿ ಉದ್ಘಾಟಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರೂ ಪ್ರಮೋದ್​​ ಮಧ್ವರಾಜ್​​ ಅವರಿಗೆ ಆಹ್ವಾನ ಇಲ್ಲದಿದ್ಧ ಬಗ್ಗೆ ಸ್ಪಷ್ಟನೆ ನೀಡಿದ್ದು, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದಿದ್ದಾರೆ.

News Image
Dakshina Kannada:

ಶಾಲಾ ವಾಹನಗಳನ್ನ ಟಾರ್ಗೆಟ್ ಮಾಡಿದ ಖದೀಮರು: ಅಪಘಾತವಾದ್ರೆ ದೇವರೇ ಗತಿ!

ಶಾಲೆಗಳ ವಾಹನಗಳಿಗೆ ವಿಮೆ ಮಾಡಿಸಿಕೊಡುತ್ತೇವೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಇಬ್ಬರು ಖತರ್ನಾಕ್​​ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯೊಂದರ ವಾಹನದ ವಿಮೆಯ ಹಣ ಕ್ಲೇಮ್ ಮಾಡಲು ಮುಂದಾದಾಗ, ಈ ನಕಲಿ ಜಾಲ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

News Image
Dakshina Kannada:

10 ಬಾಂಗ್ಲಾ ಅಕ್ರಮ ವಲಸಿಗರಿಗೆ ಜೈಲು ಶಿಕ್ಷೆ ವಿಧಿಸಿದ ಉಡುಪಿ ಕೋರ್ಟ್​

ಅಕ್ರಮವಾಗಿ ಬಂದಿದ್ದ ಬಾಂಗ್ಲಾದೇಶಿಗರು ಉಡುಪಿಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿ್ದ್ದಾರೆ. ನಕಲಿ ಆಧಾರ್ ಸೃಷ್ಟಿಸಿಕೊಂಡು ಮೀನುಗಾರಿಕಾ ಕಾರ್ಮಿಕರಾಗಿ ಉದ್ಯೋಗ ಅರಿಸಿಕೊಂಡು ಬಂದಿದ್ದರು. ಅನುಮಾಸ್ಪದ ಮೇಲೆ ಪೊಲೀಸರು, ಮಲ್ಪೆ ವಡಬಾಂಡೇಶ್ವರ ಬಸ್ ನಿಲ್ದಾಣ ಬಳಿ ಬಂಧಿಸಿದ್ದು, ಅ ವೇಳೆ ಅಕ್ರಮ ಬಾಂಗ್ಲಾ ಪ್ರಜೆಗಳು ಎನ್ನುವುದು ಗೊತ್ತಾಗಿದ್ದು, ಇದೀಗ ಒಂದು ವರ್ಷದ ಬಳಿಕ ಬಂಧಿತರಿಗೆ ಜಿಲ್ಲಾ ಕೋರ್ಟ್​ ಶಿಕ್ಷಿ ವಿಧಿಸಿದೆ.

News Image
Mysuru:

ಕುರ್ಚಿ ಕದನದ ನಡುವೆ ಸಿದ್ದರಾಮಯ್ಯಗೆ ಬಿಗ್​​ ಶಾಕ್​​:  ಸುಪ್ರೀಂಕೋರ್ಟ್​ನಿಂದ​​ ನೋಟಿಸ್​​

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸುಪ್ರೀಂಕೋರ್ಟ್​​ ನೋಟಿಸ್ ಜಾರಿ ಮಾಡಿದೆ. 2023ರ ವರುಣಾ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಗೆದ್ದಿದ್ದಾರೆ ಎಂಬ ಕೆ. ಶಂಕರ್ ಅವರ ಆರೋಪದ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಕ್ರಮ ಕೈಗೊಂಡಿದೆ. ಚುನಾವಣಾ ಆಯೋಗಕ್ಕೂ ನೋಟಿಸ್ ನೀಡಲಾಗಿದ್ದು, ಈ ಹಿಂದೆ ಶಂಕರ್​​ ಅವರ ಅರ್ಜಿಯನ್ನು ಹೈಕೋರ್ಟ್​​ ವಜಾಗೊಳಿಸಿತ್ತು.

News Image
Mysuru:

ಬೆಳಗ್ಗೆ ನಮಾಜ್​ಗೆ ಬಂದವನ ಅಟ್ಟಾಡಿಸಿ ಚುಚ್ಚಿ ಚುಚ್ಚಿ ಕೊಂದ ದುಷ್ಕರ್ಮಿಗಳು: ಸಿಸಿಟಿವಿ ವಿಡಿಯೋ ನೋಡಿ ಬೆಚ್ಚಿಬಿದ್ದ ಮೈಸೂರು ಜನ

ಅವರೆಲ್ಲಾ ಒಂದೇ ಏರಿಯಾದವರು. ಸಾಲದ್ದಕ್ಕೆ ದೋಸ್ತಿಗಳು. ಏರಿಯಾದಲ್ಲಿ ಸುತ್ತಾಡ್ಕೊಂಡು ಗಾಂಜಾ ನಶೆಯಲ್ಲಿ ತೇಲ್ತಾ ಇದ್ದವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಜೊತೆಯಲ್ಲಿದ್ದವನನ್ನೇ ಇರಿದು ಕೊಂದಿದ್ದಾರೆ. ಬುಧವಾರ ಬೆಳಗ್ಗೆ ಮೈಸೂರಿನಲ್ಲಿ ನಡೆದ ಭಯಾನಕ ಕೊಲೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ.

News Image
Mysuru:

Mysuru: 40 ದಿನಗಳಲ್ಲಿ 22 ಹುಲಿ ಸೆರೆ; ನಿಟ್ಟುಸಿರು ಬಿಟ್ಟ ಕಾಡಂಚಿನ ಜನ

ಮೈಸೂರು ಭಾಗದಲ್ಲಿ ಹೆಚ್ಚಿದ್ದ ಹುಲಿ ದಾಳಿಗಳಿಂದ ಆತಂಕಗೊಂಡಿದ್ದ ಕಾಡಂಚಿನ ಜನರಿಗೆ ಅರಣ್ಯ ಇಲಾಖೆ ರಿಲೀಫ್​​ ನೀಡಿದೆ. ಕೇವಲ 40 ದಿನಗಳಲ್ಲಿ 22 ಹುಲಿಗಳನ್ನು ಸೆರೆ ಹಿಡಿದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ ಆರೈಕೆ ಮಾಡಲಾಗುತ್ತಿದೆ. ಮಾನವ-ವನ್ಯಜೀವಿ ಸಂಘರ್ಷ ತಗ್ಗಿಸಲು ಇಲಾಖೆ ಹೊಸ ತಂತ್ರಜ್ಞಾನಗಳ ಬಳಕೆ ಜೊತೆಗೆ ಮುಖವಾಡಗಳನ್ನು ಸಹ ವಿತರಿಸಿತ್ತು.

News Image
Mysuru:

ಮೈಸೂರಿನಲ್ಲಿ ಮುಂದುವರಿದ ಹುಲಿ ಸೆರೆ ಕಾರ್ಯಚರಣೆ: ಜಿಲ್ಲೆಯ ಹಲವು ಕಡೆ ಒಂದು ತಿಂಗಳಿನಲ್ಲಿ 25 ಹುಲಿಗಳ ರಕ್ಷಣೆ

ಮೈಸೂರಿನ ಹುಣಸೂರು ತಾಲೂಕಿನಲ್ಲಿ ಹುಲಿಗಳ ಹಾವಳಿಯಿಂದ ಜನರಲ್ಲಿ ಆತಂಕ ಮನೆಮಾಡಿದೆ. ನಾಗಮಂಗಲ, ಮುತ್ತುರಾಯನ ಹೊಸಹಳ್ಳಿ ಗ್ರಾಮಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗಿವೆ. ಅರಣ್ಯ ಇಲಾಖೆ ಭೀಮ, ಏಕಲವ್ಯ, ವರಲಕ್ಷ್ಮೀ ಸಾಕಾನೆಗಳು ಮತ್ತು ಥರ್ಮಲ್ ಡ್ರೋನ್ ಬಳಸಿ ಹುಲಿ ಹಿಡಿಯಲು ಕಾರ್ಯಾಚರಣೆ ನಡೆಸಿದೆ. ಮೈಸೂರು ವಲಯದಲ್ಲಿ ಈ ಹಿಂದೆ 24 ಹುಲಿಗಳು ಮತ್ತು ಹಲವು ಆನೆಗಳನ್ನು ರಕ್ಷಿಸಲಾಗಿದೆ. ವನ್ಯಜೀವಿ ಸಂರಕ್ಷಣೆಗೆ ಸಿಬ್ಬಂದಿ ಹಾಗೂ ಮೂಲಸೌಕರ್ಯ ಅಗತ್ಯ.

News Image
Koppal:

Koppal: ಹನುಮ‌ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಅಣಿಯಾದ ಅಂಜನಾದ್ರಿ; ಸಿದ್ಧತೆ ಹೇಗಿದೆ?

ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ನಾಳೆ ನಡೆಯಲಿರುವ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ನವ ನದಿ ಜಲಾಭಿಷೇಕ, ಪಂಚಾಮೃತ ಅಭಿಷೇಕ, ಪವನ ಹೋಮ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರ ಅನುಕೂಲಕ್ಕೆ ಕುಡಿಯುವ ನೀರು, ಊಟ, ವೈದ್ಯಕೀಯ ಸೇವೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

News Image
Koppal:

ಮದುವೆಗೂ ಮುನ್ನ ಮಸಣ ಸೇರಿದ ಜೋಡಿ: ಅಪಘಾತಕ್ಕೂ ಮೊದಲು ನಡೆದಿತ್ತು ಫೋಟೋ ಶೂಟ್​

ಭೀಕರ ಅಪಘಾತದಲ್ಲಿ ಹಸೆಮಣೆ ಏರಬೇಕಿದ್ದ ಜೋಡಿಯೊಂದು ದಾರುಣವಾಗಿ ಮೃತಪಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಪ್ರಿ ವೆಡ್ಡಿಂಗ್​​ ಫೋಟೋ ಶೂಟ್​ ಮುಗಿಸುಕೊಂಡು ಬರುವ ವೇಳೆ ನಡೆದ ಬೈಕ್​​ ಅಪಘಾತದಲ್ಲಿ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಯುವಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಪ್ರಾಣಬಿಟ್ಟಿದ್ದಾನೆ. ಹೀಗಾಗಿ ಮದುವೆ ಸಂಭ್ರಮದಲ್ಲಿದ್ದ ಮನೆಗೆ ಭರಸಿಡಿಲು ಬಡಿದಂತಾಗಿದೆ.

News Image
Koppal:

ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು

ಬಲ್ಡೋಟಾ ಕಾರ್ಖಾನೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಕಾರ್ಖಾನೆ ಬೇಕೇಬೇಕೆಂದು ಕೊಪ್ಪಳ ಜಿಲ್ಲಾಡಳಿತ ಕಚೇರಿ ಮುಂದೆ ರೈತರು ಇಂದಿನಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಬಲ್ಡೋಟಾ ಕಾರ್ಖಾನೆ ಕುರಿತಾಗಿ ಕೊಪ್ಪಳದಲ್ಲಿ ಪರ-ವಿರೋಧ ಹೋರಾಟ ಶುರುವಾಗಿದೆ. ಸದ್ಯ ಈ ಹೋರಾಟ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

News Image
Koppal:

ಪ್ರೀ ವೆಡ್ಡಿಂಗ್ ಶೂಟ್‌ಗೆ ಹೋದ ಜೋಡಿ ಭೀಕರ ಅಪಘಾತದಲ್ಲಿ ದುರ್ಮರಣ! ಹಸೆಮಣೆ ಏರಬೇಕಿದ್ದವರ ದಾರುಣ ಅಂತ್ಯ

ಮದುವೆಗೆ ಎರಡು ವಾರ ಬಾಕಿ ಇದ್ದಾಗ ಪ್ರೀ ವೆಡ್ಡಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಜೋಡಿ ಬೈಕ್ ಅಪಘಾತದಲ್ಲಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಕೊಪ್ಪಳದಲ್ಲಿ ನಡೆದಿದೆ. ಮಂಡ್ಯ ಹಾಗೂ ಚಿಕ್ಕಮಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತಗಳೂ ಸೇರಿದಂತೆ ಭಾನುವಾರ ಕರ್ನಾಟಕದಲ್ಲಿ ಪ್ರತ್ಯೇಕ ಆ್ಯಕ್ಸಿಡೆಂಟ್​​ಗಳಲ್ಲಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.

News Image
Bangalore Rural:

ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ಭಾರಿ ಚಿನ್ನದ ನಿಕ್ಷೇಪ ಪತ್ತೆ! ಉತ್ಖನನಕ್ಕೊಪ್ಪದ ಅರಣ್ಯ ಇಲಾಖೆ

ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ಅತಿದೊಡ್ಡ ಚಿನ್ನ ಮತ್ತು ಲಿಥಿಯಂ ನಿಕ್ಷೇಪಗಳು ಪತ್ತೆಯಾಗಿವೆ. ಆದರೆ ಈ ಪ್ರದೇಶಗಳು ಸಂರಕ್ಷಿತ ಅರಣ್ಯಗಳ ಅಡಿಯಲ್ಲಿ ಬರುವುದರಿಂದ ಗಣಿಗಾರಿಕೆ ಮತ್ತು ಶೋಧನೆ ಸ್ಥಗಿತಗೊಂಡಿದೆ. ರಾಜ್ಯದ 65 ಸ್ಥಳಗಳಲ್ಲಿ ಪ್ಲಾಟಿನಂ, ತಾಮ್ರ ಸೇರಿದಂತೆ ಹಲವು ಅಪರೂಪದ ಖನಿಜಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅನುಮತಿಗಾಗಿ ಭೂವಿಜ್ಞಾನ ಇಲಾಖೆ ಕಾಯುತ್ತಿದೆ.

News Image
Koppal:

ವಾರದ ಹಿಂದಷ್ಟೇ ಮದ್ವೆಯಾಗಿದ್ದ ಜೋಡಿಯನ್ನು ಅಗಲಿಸಿದ ಜಾತಿ: ಹೆಂಡ್ತಿಬೇಕೆಂದು ಎಸ್ಪಿ ಮೊರೆ ಹೋದ ಯುವಕ

ಕೊಪ್ಪಳ ಜಿಲ್ಲೆಯಲ್ಲಿ ಹಸಮಣೆ ಏರಬೇಕಾಗಿದ್ದ ಜೋಡಿ ಫೋಟೋ ಶೂಟ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಅಪಘಾತದಲ್ಲಿ ದುರಂತ ಅಂತ್ಯಕಂಡಿತ್ತು. ಈ ಸುದ್ದಿ ಕೇಳಿ ಕೊಪ್ಪಳ ಜಿಲ್ಲೆ ಜನರ ಕಣ್ಣಂಚಲ್ಲಿ ನೀರು ತಿರಿಸಿತ್ತು. ಇದರ ಮಧ್ಯೆ ಇನ್ನೊಂದು ಜೋಡಿ ವಾರದ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯನ್ನು ಜೋಡಿಯನ್ನು ಯುವತಿಯ ಪೋಷಕರು ಅಗಲಿಸಿದ್ದಾರೆ. ಹೀಗಾಗಿ ಯುವಕ ಹೆಂಡ್ತಿ ಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಅಷ್ಟಕ್ಕೂ ಏನಿದು,ನವ ಜೋಡಿ,ಜಾತಿ ವ್ಯವಸ್ಥೆ ಅಂತೀರಾ ಈ ಸ್ಟೋರಿ ಓದಿ.

News Image
Sports:

ರಾಜ್ಯ ಸರ್ಕಾರದಿಂದ RCB ಅಭಿಮಾನಿಗಳಿಗೆ ಗುಡ್ ನ್ಯೂಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳನ್ನು ಆಯೋಜಿಸಲು ಅವಕಾಶ ನೀಡಬೇಕೆಂದು ಕೆಎಸ್​ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಮನವಿಗೆ ಸರ್ಕಾರದ ಕಡೆಯಿಂದಲೂ ಸಕರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

News Image
Sports:

ಲೆಜೆಂಡ್ಸ್ ಪ್ರೊ ಟಿ20 ಲೀಗ್‌ನಲ್ಲಿ ಕ್ರಿಕೆಟ್ ದಿಗ್ಗಜರ ಪುನರ್ಮಿಲನ

Legends Pro T20 League 2026: ಟಿ20 ಲೀಗ್​ಗೆ ಹೊಸ ಟೂರ್ನಿಯೊಂದು ಸೇರ್ಪಡೆಯಾಗಲಿದೆ. ಈ ಟೂರ್ನಿಯಲ್ಲಿ ರಾಬಿನ್ ಉತ್ತಪ್ಪ. ಕ್ರಿಸ್ ಗೇಲ್, ಶೇನ್ ವಾಟ್ಸನ್, ಹರ್ಭಜನ್ ಸಿಂಗ್, ಡೇಲ್ ಸ್ಟೇನ್ ಸೇರಿದಂತೆ ಲೆಜೆಂಡ್ಸ್ ಆಟಗಾರರು ಕಣಕ್ಕಿಳಿಯಲಿದ್ದಾರೆ. ಲೆಜೆಂಡ್ಸ್ ಪ್ರೊ ಟಿ20 ಲೀಗ್​ ಹೆಸರಿನ ಈ ಟೂರ್ನಿಯು ಜನವರಿ 26 ರಿಂದ ಫೆಬ್ರವರಿ 4 ರ ನಡುವೆ ಗೋವಾದಲ್ಲಿ ನಡೆಯಲಿದೆ. 

News Image
Film:

‘ಧುರಂದರ್’ ಸಿನಿಮಾದ ‘ರಾಜಕೀಯ’ದ ಬಗ್ಗೆ ಹೃತಿಕ್ ರೋಷನ್ ಅಸಮಾಧಾನ

Dhurandhar movie: ರಣ್ವೀರ್ ಸಿಂಗ್ ನಟನೆಯ ‘ಧುರಂದರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಭರ್ಜರಿ ಕಲೆಕ್ಷನ್ ಅನ್ನು ಮಾಡುತ್ತಿದೆ. ಅದರ ಜೊತೆಗೆ ಸಿನಿಮಾನಲ್ಲಿ ಪ್ರೊಪೊಗಾಂಡ ಅಂಶಗಳು ಇವೆ ಎಂಬ ಚರ್ಚೆಯೂ ಚಾಲ್ತಿಯಲ್ಲಿದೆ. ಇದರ ನಡುವೆ ಸ್ಟಾರ್ ನಟ ಹೃತಿಕ್ ರೋಷನ್, ‘ಧುರಂದರ್’ ಸಿನಿಮಾದ ರಾಜಕೀಯ ತಮಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

News Image
Film:

ಭಾರತದ ಅತ್ಯಂತ ಜನಪ್ರಿಯ ತಾರೆಯರ​ ಪಟ್ಟಿಯಲ್ಲಿ ಕನ್ನಡದ ಮೂವರಿಗೆ ಸ್ಥಾನ

IMDb 2025ರ ಭಾರತದ ಅತ್ಯಂತ ಜನಪ್ರಿಯ ತಾರೆಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಬಾರಿ ಶಾರುಖ್, ಸಲ್ಮಾನ್ ಸ್ಥಾನ ಪಡೆದಿಲ್ಲ. ಟಾಪ್ 10ರಲ್ಲಿ ಬಹುತೇಕ ಹೊಸ ಮುಖಗಳಿದ್ದು, ಮೂವರು ಕನ್ನಡದ ಕಲಾವಿದರಾದ ರಶ್ಮಿಕಾ ಮಂದಣ್ಣ (6), ರುಕ್ಮಿಣಿ ವಸಂತ್ (9), ರಿಷಬ್ ಶೆಟ್ಟಿ (10) ಸ್ಥಾನ ಗಳಿಸಿದ್ದಾರೆ.

News Image
Film:

ಯಶ್ ನಟನೆಯ ‘ಟಾಕ್ಸಿಕ್’ ಎದುರು ರಿಲೀಸ್ ಆಗ್ತಿದೆ ಐದು ದೊಡ್ಡ ಸಿನಿಮಾಗಳು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19, 2026 ರಂದು ಈದ್/ಯುಗಾದಿ ಸಂದರ್ಭದಲ್ಲಿ ತೆರೆಗೆ ಬರಲು ಸಿದ್ಧವಾಗಿದೆ. ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಐದು ದೊಡ್ಡ ಸಿನಿಮಾಗಳು ಪೈಪೋಟಿ ನೀಡಲಿವೆ. ಎಲ್ಲರೂ ಇದೇ ದಿನ ಆಯ್ಕೆ ಮಾಡಿಕೊಳ್ಳಲು ಹಲವು ಕಾರಣಗಳು ಇವೆ. ಆ ಬಗ್ಗೆ ಇಲ್ಲಿದೆ ವಿವರ.

News Image
Sports:

ವಿಶ್ವಕಪ್​ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಭಾರತೀಯ ಮೂಲದ ಇಬ್ಬರಿಗೆ ಸ್ಥಾನ

Men’s U-19 World Cup 2026: ಝಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಲಿರುವ ಅಂಡರ್-19 ಪುರುಷರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 16 ತಂಡಗಳು ಕಣಕ್ಕಿಳಿಯಲಿವೆ. ಜನವರಿ 15 ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ್, ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಝಿಲೆಂಡ್, ಬಾಂಗ್ಲಾದೇಶ್ ಸೇರಿದಂತೆ ಪ್ರಮುಖ ರಾಷ್ಟ್ರಗಳ ಕಿರಿಯ ಆಟಗಾರರು ಕಣಕ್ಕಿಳಿಯಲಿದ್ದಾರೆ.

Shorts Shorts